International Yoga Day

ದಿನಾಂಕ: 21.06.2022


ಆದರ್ಶ ಮತ್ತು ಆರೋಗ್ಯವಾದ ಜೀವನಕ್ಕೆ ಯೋಗ ಅವಶ್ಯಕ - ಶ್ರೀ ದರೂರು ಶಾಂತನಗೌಡ

ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಕಾಲೇಜಿನಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಜಂಟಿ ಕಾರ್ಯದರ್ಶಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ದರೂರು ಶಾಂತನಗೌಡ ಮಾತನಾಡಿ ಯೋಗಭ್ಯಾಸ ಮಾಡುವ ಮೂಲಕ ಎಲ್ಲ ರೀತಿಯ ರೋಗಗಳ ಜೊತೆಗೆ ವ್ಯಸನ, ಹಿಂಸೆ, ಯಾವುದೇ ನಕಾರಾತ್ಮಕ ಆಲೋಚನೆಗಳು ಅಥವಾ ನಕಾರಾತ್ಮಕ ಭಾವನೆಗಳು ಮತ್ತು ಅಮಾನವೀಯ ಪ್ರವೃತ್ತಿಗಳಿಂದ ಮುಕ್ತರಾಗಬಹುದು. ಎಲ್ಲ ವಿದ್ಯಾರ್ಥಿಗಳು ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಢಿಸಿಕೊಂಡಲ್ಲಿ ಆದರ್ಶ ಮತ್ತು ಆರೋಗ್ಯವಾದ ಜೀವನ ಮತ್ತು ಶಾಂತಚಿತ್ತವಾದ ಮನಸ್ತಿತಿಯನ್ನು ಹೊಂದಬಹುದು. ಇದರಿಂದ ಸಧೃಢ ದೇಶವನ್ನು ನಿರ್ಮಿಸಬಹುದಾಗಿದೆ ಎಂದರು.

IMG-20220621-WA0083.jpg
ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶ್ರೀ.ಬಿ.ಶಿವಕುಮಾರ್, ನಗರ ಶಾರೀರಿಕ ಶಿಕ್ಷಣ ಪ್ರಮುಖ ಅವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ಪಾರಂಪರಿಕ ಯೋಗ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಮೂಲಕ ಉನ್ನತಿಯನ್ನು ಸಾಧಿಸಬಹುದು ಎಂದು ನುಡಿದರು. ಹಾಗಯೇ ಅನೇಕ ವಿಧವಾದ ಯೋಗಾಸನಗಳನ್ನು ಪ್ರದರ್ಶಿಸಿದರು.

1655793123279.jpg

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಂಶುಪಾಲರು ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಯವರು ಕ್ರಿಯಶೀಲರಾಗಿ ಭಾಗವಹಿಸಿದ್ದರು.

1655793123287.jpg

Contact Address

Veerashaiva College
Cantonment
Ballari

   
08392 - 242185 / 242183
    08392 - 242183
    This email address is being protected from spambots. You need JavaScript enabled to view it.
X