SAKALA Programme held on 24.12.2021
Hits: 1105
V.V.Sangha’s
Veerashaiva College, Ballari.
IQAC
SAKALA Programme held on 24.12.2021



ದಿನಾಂಕ 24.12.2021
ಅಜಾದಿ ಕ ಅಮೃತ ಮಹೋತ್ಸವ ಅಡಿಯಲ್ಲಿ ಸಕಾಲ ಕುರಿತು ಜಾಗೃತಿ ಕಾರ್ಯಕ್ರಮ :- ಶ್ರೀ ಸಯ್ಯದ್ದ್
ನೆಹರು ಯುವಕೇಂದ್ರ ಸಂಘಟನೆಯ ಸಹಕಾರದೊಂದಿಗೆ ಸಕಾಲ ಕುರಿತು ಜಾಗೃತಿ ಕಾರ್ಯಕ್ರಮವನ್ನು ವೀರಶೈವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದು ಅಜಾದಿ ಕ ಅಮೃತ ಮಹೋತ್ಸವ ಅಡಿಯಲಿ ಗುಡ್ ಗವರ್ನೆಸ್ ಸಪ್ತಾಹ ದಡಿಯಲ್ಲಿ ದಿನಾಂಕ 24.12.2021ರಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯಸರ್ಕಾರದ ಅಡಿಯಲ್ಲಿ ಬರುವ ಸಕಾಲ ಯೋಜನೆಗಳ ಬಗ್ಗೆ ಹೇಗೆ ಉಪಯೋಗಿಸಿಕೊಳ್ಳಬಹುದೆಂದು ಮತ್ತು ವಿದ್ಯಾರ್ಥಿಗಳಿಗೆ ಸಕಾಲ ಸ್ನೇಹಜೀವಿಯಾಗಿ ವಿದ್ಯಾರ್ಥಿಗಳಿಗೆ ಸೂಚಿಸಿದರು. ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಸಯ್ಯದ್ದ್, ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ನೆಹರು ಯುವ ಕೇಂದ್ರ ಸಂಘಟನೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾ ಯುವ ಅಧಿಕಾರಿಯಾದ ಶ್ರೀ ಮಂಟು ಪತ್ತರ್ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ವೀ.ವಿ.ಸಂಘದ ಸಹ ಕಾರ್ಯದರ್ಶಿಗಳಾದ ಶ್ರೀ. ದರೂರು ಶಾಂತನಗೌಡ ಮಾತನಾಡಿ ತಮ್ಮ ವೈಕ್ತಿಕ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೊಳ್ಳುತ್ತ, ಸಕಾಲ ಹೇಗೆ ಉಪಯುಕ್ತವಾಗಿರುವುದೆಂದು ಸವಿವರವಾಗಿ ವಿದ್ಯಾರ್ಥಿಗಳಿಗೆ ಹೇಳಿದರು. ನಮ್ಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ.ಬಿ.ತಿಮ್ಮನಗೌಡ ಪಾಟೀಲ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಕಾಲದ ಬಗ್ಗೆ ತಿಳಿಯಲು ಪ್ರೋತ್ಸಹಿಸಿದರು. ಶ್ರೀ.ಶರಣಕುಮಾರ್.ಎಸ್.ಆರ್ ,ಮುಖ್ಯಸ್ಥರು ಗಣಕಯಂತ್ರ ವಿಭಾಗ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ.ಡಬ್ಲ್ಯೂ.ಶರಣಪ್ಪ, ಶ್ರೀ.ಎಸ್.ರೇವಣಸಿದ್ದಪ್ಪ, ಡಾ.ಜಿ.ಮನೋಹರ ಮತ್ತು ಡಾ.ರವಿಕುಮಾರ್ ನಾಯ್ಕ.ಟಿ.ಆರ್ ಇನ್ನಿತರ ಹಿರಿಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.