Department of Kannada
ಕನ್ನಡ ವಿಭಾಗದ ಹಿರಿಮೆ-ಗರಿಮೆ:
1945ರಲ್ಲಿ ಬಳ್ಳಾರಿಯ ದಂಡುಪ್ರದೇಶದಲ್ಲಿ ವೀರಶೈವ ಮಹಾವಿದ್ಯಾಲಯದ ಆರಂಭದೊಂದಿಗೆ ಕನ್ನಡ ವಿಭಾಗವೂ ಆರಂಭಗೊಂಡಿತು. ಖ್ಯಾತ ಸಾಹಿತಿ ಪಂಡಿತ ವೈ.ನಾಗೇಶಶಾಸ್ತ್ರಿಗಳ ಅಧ್ವರ್ಯುತನದಲ್ಲಿ ಹತ್ತು ವರ್ಷ ಹೆಮ್ಮೆಯಿಂದ ಹೆಜ್ಜೆ ಇಡುತ್ತಾ ಬಂತು. ಅವರ ನಂತರ ಕುವೆಂಪುರವರ ನೇರ ಶಿಷ್ಯರಾದ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿಯವರು ವಿಭಾಗವನ್ನು ಸೇರಿ, ಕೆಲವು ಕಾಲ ಸೇವೆಸಲ್ಲಿಸಿದರು. ನಂತರದ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಹೆಸರು ಮಾಡಿರುವ ಶ್ರೀಯುತರುಗಳಾದ ಕೆ.ಬಿ. ಹನುಮಂತರಾಯ, ಎಂ.ಆರ್. ವಿಶ್ವನಾಥ ರೆಡ್ಡಿ, ಡಾ. ಬಸವರಾಜ ಮಲಶೆಟ್ಟಿ, ಇಟಗಿ ಈರಣ್ಣ, ಡಾ. ಚಂದ್ರಕಾಂತ ವಿ. ಚೌವ್ಹಾಣ್, ಡಾ. ಎಸ್. ಶಿವಾನಂದ, ಡಾ. ಜಿ.ಕೆ. ವಿಶ್ವೇಶ್ವರಪ್ಪ ಸೇವೆಸಲ್ಲಿಸಿದ್ದಾರೆ.
ಈಗ 2015ರಲ್ಲಿ, ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಿಕ್ಷಣ ಕ್ಷೇತ್ರದ ಸೇವೆಗಾಗಿ, ಡಾ.ಸುಭಾಷ್ ಭರಣಿ ವೇದಿಕೆಯಿಂದ ರಾಜ್ಯಮಟ್ಟದ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಪುರಸ್ಕøತರೂ ಆದ ಶ್ರೀ ಕೆ. ಮಹಾಬಲೇಶ್ವರ, ಕನ್ನಡ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಇಬ್ಬರು ಡಾಕ್ಟರೇಟ್ ಪದವೀಧರರಾದ ಡಾ. ಆರ್.ಬಿ. ದಿವಾಕರ, ಡಾ. ಬಿ.ಆರ್.ಮಂಜುನಾಥ ಜೊತೆಗೆ ಉತ್ತಮ ಗಾಯಕರಾದ ಶ್ರೀ ಕೆ.ಎಸ್. ಬಿಸರಳ್ಳಿ - ಹೀಗೆ ಇವರೆಲ್ಲ 23 ವರ್ಷಗಳ ಅಧ್ಯಯನ - ಅಧ್ಯಾಪನ ಅನುಭವವುಳ್ಳ ಖಾಯಂ ಉಪನ್ಯಾಸಕರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುದೀರ್ಘ ಇತಿಹಾಸವಿರುವ ಕನ್ನಡ ಐಚ್ಛಿಕ ವಿಭಾಗದಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳು ಶಾಲಾ ಉಪಧ್ಯಾಯರುಗಳಾಗಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಗಳಾಗಿ ಮತ್ತು ವಿವಿಧ ಸ್ಪರ್ಧಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಇಲಾಖೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಸಹ ‘ಕ್ಯಾಂಪಸ್ ಸೆಲಕ್ಷನ್’ಗಳಲ್ಲಿ ಪ್ರಮುಖ ಕಂಪನಿಗಳಿಗೆ ಆಯ್ಕೆ ಆಗಿದ್ದಾರೆ. ಅನೇಕ ಬರಹಗಾರರು, ಕವಿಗಳು, ಕಥೆಗಾರರು, ಕಾದಂಬರಿಕಾರರು, ಪತ್ರಕರ್ತರು, ಕಲಾವಿದರು ನಮ್ಮ ಕನ್ನಡ ವಿಭಾಗದಿಂದ ರೂಪುಗೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದಾರೆ - ನೀವೂ ನಮ್ಮ ಮಹಾವಿದ್ಯಾಲಯ ಸೇರಿ ಜಯಶಾಲಿಗಳಾಗಿರಿ.
ಅouಡಿses oಜಿಜಿeಡಿeಜ iಟಿ ಣhe ಆeಠಿಚಿಡಿಣmeಟಿಣ:
‘ಕನ್ನಡ ಐಚ್ಛಿಕ’ ವಿಷಯದ ಆಯ್ಕೆಗೆ ಅವಕಾಶವಿದೆ (ಕನ್ನಡ ಐಚ್ಛಿಕ, ಇತಿಹಾಸ, ಸಮಾಜಶಾಸ್ತ್ರ).
ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ. ಹಾಗು ಬಿ.ಸಿ.ಎ. ವಿದ್ಯಾರ್ಥಿಗಳಿಗೆ ‘ಸಾಮಾನ್ಯ (ಆವಶ್ಯಕ) ಕನ್ನಡ’ ಆಯ್ಕೆಗೆ ಅವಕಾಶವಿದೆ.
ಸಂಶೋಧನಾ ಕೇಂದ್ರ: ಇದೀಗ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ವೀರಶೈವ ಮಹಾವಿದ್ಯಾಲಯದಲ್ಲಿ ಸಂಶೋಧನ ಕೇಂದ್ರ ಆರಂಭಿಸಲು ಒಪ್ಪಿಗೆಕೊಟ್ಟಿದ್ದು, ಇನ್ನು ಮುಂದೆ ಕನ್ನಡ ವಿಭಾಗದ ಇಬ್ಬರು ಸಹಪ್ರಾಧ್ಯಾಪಕರುಗಳಾದ ಡಾ. ಆರ್.ಬಿ. ದಿವಾಕರ್ ಮತ್ತು ಡಾ. ಬಿ.ಆರ್. ಮಂಜುನಾಥ ಇವರುಗಳು, ಕನ್ನಡ ವಿಷಯದಲ್ಲಿ ಎಂ.ಫಿಲ್., ಪಿ.ಎಚ್‍ಡಿ. ಪಡೆಯಲು ಇಚ್ಛಿಸುವವರಿಗೆ ಮಾರ್ಗದರ್ಶಕರಾಗಿ ಲಭ್ಯರಿರುತ್ತಾರೆ.
ಸೌಲಭ್ಯಗಳು:
ಗ್ರಂಥಾಲಯ: ಅತ್ಯಂತ ಪುರಾತನ ಶ್ರೇಷ್ಠ ಗ್ರಂಥಗಳಿಂದ ಹಿಡಿದು, ಹೊಸತಲೆಮಾರಿನ ಸುಮಾರು 4,000ಕ್ಕಿಂತ ಹೆಚ್ಚು ಗ್ರಂಥಗಳು ಮತ್ತು ನಿಯತಕಾಲಿಕೆಗಳು ಲಭ್ಯ.
ಡಿಜಿಟಲ್ ಲೈಬ್ರರಿ: ಕೇಂದ್ರ ಗ್ರಂಥಾಲಯವು ವೈಫೈ (ಇಂಟರ್‍ನೆಟ್) ಸೌಲಭ್ಯದಿಂದ ಕೂಡಿದ್ದು, ವಿದ್ಯಾರ್ಥಿಗಳ ಉಪಯೋಗಕ್ಕೆ ಮುಕ್ತವಾಗಿದೆ. ಪಠ್ಯಗಳಿಗೆ ನೇರ ಹಾಗು ಪರೋಕ್ಷವಾಗಿ ಸಂಬಂಧಿಸಿದ ಮುದ್ರಿತ ಸಿ.ಡಿ., ಡಿ.ವಿ.ಡಿ. ಹಾಗು ಕ್ಯಾಸೆಟ್‍ಗಳ ಸಂಗ್ರಹವು ಲಭ್ಯವಿರುತ್ತವೆ. ಇವುಗಳನ್ನು ಆಯ್ದ ದಿನಗಳಲ್ಲಿ ಆಯ್ದ ತರಗತಿಗಳಿಗೆ ಪ್ರದರ್ಶಿಸಲಾಗುವುದು ಮತ್ತು ವಿದ್ಯಾರ್ಥಿಗಳು ಬಯಸಿದಲ್ಲಿ, ಪ್ರತ್ಯೇಕವಾಗಿ ಗ್ರಂಥಾಲಯದಲ್ಲಿ ಇರುವ ಕಂಪ್ಯೂಟರ್, ಡಿ.ವಿ.ಡಿ. ಪ್ಲೇಯರ್ ಸಹಿತ ಟಿ.ವಿ. ಸೆಟ್ ಹಾಗು ಎಲ್.ಸಿ.ಡಿ. ಪ್ರೊಜೆಕ್ಟರ್‍ಗಳ ಮೂಲಕ ಸಣ್ಣ ಗುಂಪುಗಳಾಗಿಯು ವೀಕ್ಷಿಸಬಹುದು.
Events conducted by the Department:
EVENTS-1
EVENTS-2