ಅರೆ ಕಂಡಕ್ಟರ್ ಸಾಧನಗಳ ಮೇಲೆ ವಿಕಿರಣದ ಪರಿಣಾಮಗಳು ಕುರಿತು ವಿಶೇಷ ಉಪನ್ಯಾಸ

ಭೌತಶಾಸ್ರ್ತ ವಿಭಾಗ


ಅರೆ ಕಂಡಕ್ಟರ್ ಸಾಧನಗಳ ಮೇಲೆ ವಿಕಿರಣದ ಪರಿಣಾಮಗಳು ಕುರಿತು ವಿಶೇಷ ಉಪನ್ಯಾಸ

ದಿನಾಂಕ 22.02.2020ರಂದು ಭೌತಶಾಸ್ರ್ತ ವಿಭಾಗದಿಂದ “ಅರೆ ಕಂಡಕ್ಟರ್ ಸಾಧನಗಳ ಮೇಲೆ ವಿಕಿರಣದ ಪರಿಣಾಮಗೆಳು” ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

Capture

ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಮೈಸೂರು ವಿಶ್ವವಿದ್ಯಾಲಯದ, ಭೌತಶಾಸ್ರ್ತ ಪ್ರಾಧ್ಯಾಪಕ ಪ್ರೊ.ಜ್ಞಾನ ಪ್ರಕಾಶ್, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪಠ್ಯಕ್ರ್ರಮದ ಒಂದು ಘಟಕವಾಗಿರುವ ಅರೆ ಕಂಡಕ್ಟರ್ ಕಾರ್ಯಗಳು ಮತ್ತು ವಿಕಿರಣದ ಪರಿಣಾಂಗಳ ಬಗ್ಗೆ ವಿಸ್ತರ್ಥವಾಗಿ ತಿಳಿಸಿದರು. ಈ ಕ್ಷೇತ್ರದಲ್ಲಿ ಇತ್ತೀಚಿಗೆ ನಡೆದಿರುವ ಸಂಶೋಧನೆಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ಕಾಸಮೊಸ್‍ಗಳಿಂದ ಬಿಡುಗಡೆಯಾಗುವ ಅತೀ ಹೆಚ್ಚು ವಿಕಿರಣಗಳ ಪರಿಣಾಮದಿಂದ ಅರೆ ಕಂಡಕ್ಟರ್ ಸಾಧನಗಳ ಕಾರ್ಯದಲ್ಲಿ ಆಗುವ ಏರು ಪೇರುಗಳ ಮೇಲೆ ಬೆಳಕು ಚೆಲ್ಲಿದರು. ನಕ್ಷ ಬಿಡಿಸಿ ಅರೆ ಕಂಡಕ್ಟರ್ ಸಾಧನಗಳ ಕಾರ್ಯಕ್ಷಮತೆ ಹೇಗೆ ಕ್ಷೀಣಿಸುತ್ತ ಹೋಗುತ್ತದೆ ಎನ್ನುವುದನ್ನು ವಿವರಿಸಿದರು. ಅರೆ ಕಂಡಕ್ಟರ್ ಸಾಧನಗಳ ಕಾರ್ಯಕ್ಷಮತೆ ಸುಧಾರಿಸುವ ಮತ್ತು ವಿಕಿರಣಗಳ ಪರಿಣಾಮ ತಡೆದುಕೊಳ್ಳುವ ಸಾಮಥ್ರ್ಯದ ಬಗ್ಗೆ ತಿಳಿಸಿದರು. ಪ್ರಾಚಾರ್ಯರಾದ ಡಾ.ಜಿ.ರಾಜಶೇಖರ ಅಧ್ಯಕ್ಷತೆ ವಹಿಸಿದರು. ಕುಮಾರಿ ಶರ್ಲಿ ಜೋನ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.ಕುಮಾರಿ ರಮ್ಯಶ್ರೀ ಪ್ರಾರ್ಥನೆ ಹೇಳಿದರು.

 

ಸಂಪರ್ಕ ವಿಳಾಸ

Veerashaiva College
Cantonment
Ballari

   
08392 - 242185 / 242183
    08392 - 242183
    This email address is being protected from spambots. You need JavaScript enabled to view it.