ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಂತ್ರಸ್ಥರ ನೆರವಿಗೆ ಸಹಾಯ ಧನ

ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಂತ್ರಸ್ಥರ ನೆರವಿಗೆ ಸಹಾಯ ಧನ

IMG 20190814 1707041

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಲಕ್ಷಗಟ್ಟಲೆ ಜನರು ನಿರಾಶ್ರಿತರಾಗಿ ಆಸ್ತಿಪಾಸ್ತಿ, ಜಾನುವಾರುಗಳು ಮತ್ತು ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ದುಸ್ತಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಪ್ರವಾಹದಿಂದ ತತ್ತರಿಸಿದ ಜನರ ನೆರವಿಗೆ ವೀರಶೈವ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಗೋನಾಳ ರಾಜಶೇಕರ ಗೌಡ, ಪ್ರಾಚಾರ್ಯ ಡಾ.ಜಿ.ರಾಜಶೇಖರ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು 85 ಸಾವಿರ ರೂಪಾಯಿಗಳ ಚೆಕನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗೋನಾಳ ರಾಜಶೇಖರ ಗೌಡರು ರಾಜ್ಯದ 17 ಜಿಲ್ಲೆಗಳಲ್ಲಿ ಉಂಟಾದ ಭಾರಿ ಪ್ರಮಾಣದ ನೆರೆಹಾವಳಿ ಅತ್ಯಂತ ಭೀಕರವಾಗಿದ್ದು, ಅಪಾರ ನಷ್ಟವನ್ನುಂಟು ಮಾಡಿದೆ. ಸೈನಿಕರು, ಸ್ವಯಂ ಸೇವಕರು, ಅಗ್ನಿಸಾಮಕ ದಳದವರು ಹಾಗೂ ಪೊಲೀಸರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಮತ್ತು ಪಶುಪ್ರಾಣಿಗಳನ್ನು ಸಾವಿನ ದವಡೆಯಿಂದ ರಕ್ಷಿಸಲು ಪ್ರಾಣದ ಹಂಗು ತೋರೆದು ರಾತ್ರಿ ಹಗಲು ಎನ್ನದೆ ಹೋರಾಡಿದ್ದು ಎಂದು ಮರೆಯಲಿಕ್ಕಾಗದು ಎಂದರು.  ಪ್ರವಾಹಗಳು ಇನ್ನೂ ಮುಂದೆ ಉಂಟಾಗದಂತೆ ತಡೆಯಲು ದೋಷರಹಿತ ಮಾನವನ ಅಭಿವೃದ್ಧಿ ಯೋಜನೆಗಳನ್ನು ರಚಿಸಬೇಕಾಗಿದೆ ಎಂದು ಸೂಚಿಸಿದರು. ಪ್ರಕೃತಿ ಮೊದಲಿನಂತೆ ಸಹಜವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳಬೇಕಾಗಿದೆ ಎಂದು ತಿಳಿಸಿದರು. ಮಾನವನ ದುರುದ್ದೇಶಿತ ಚಟುವಟಿಕೆಗಳಿಂದ ಸಂಭವಿಸುತ್ತಿರುವ ಇಂತಹ ದುರಂತಗಳು ಪುನಾರವರ್ತನೆಯಾಗದಂತೆ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಂಗ್ರಹಿಸಿದ ಬಟ್ಟೆಗಳು, ಪಾತ್ರೆ ಸಾಮಾನುಗಳು, ಆಹಾರ ಧಾನ್ಯಗಳು ಮತ್ತು ಗ್ರಹ ಬಳಿಕೆ ವಸ್ತುಗಳನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿ ಗ್ರಾಮದ ನೆರ ಸಂತ್ರಸ್ತರಿಗೆ ತಲುಪಿಸಲು ವಿದ್ಯಾರ್ಥಿಗಳ ತಂಡಯೊಂದು ಸಾಮಾಗ್ರಿಗಳ ಸಮೇತ ಇಂದು ಪ್ರಯಾಣ ಬೆಳಸಿದೆ. ಆ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ಹೊರಟ ವಿದ್ಯಾರ್ಥಿಗಳ ನೆರವಿನ ಕಾರ್ಯ ಯಶಶ್ವಿಯಾಗಿ ಸಾಗಲಿ ಎಂದು ಅಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರ ಗೌಡ, ಪ್ರಾಚಾರ್ಯ ಡಾ.ಜಿ.ರಾಜಶೇಖರ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಬೀಳ್ಕೊಟ್ಟು ಶುಭಹಾರೈಸಿದರು.     

IMG 20190813 112842

ಸಂಪರ್ಕ ವಿಳಾಸ

Veerashaiva College
Cantonment
Ballari

   
08392 - 242185 / 242183
    08392 - 242183
    This email address is being protected from spambots. You need JavaScript enabled to view it.