About Department of Kannada

ವೀರಶೈವ ವಿದ್ಯಾವರ್ಧಕ ಸಂಘದ ಆಶೋತ್ತರಗಳ ಆಶಾಕಿರಣವಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ (1945) ಬಳ್ಳಾರಿಯ ದಂಡುಪ್ರದೇಶದಲ್ಲಿ ಪ್ರಾರಂಭಗೊಂಡದ್ದು ವೀರಶೈವ ಮಹಾವಿದ್ಯಾಲಯ . ಈ ನೆಲದ ಭಾಷೆಯ ಮೂಲಕ ನಾಡು-ನುಡಿ,ಸಾಹಿತ್ಯ ಸಂಸ್ಕೃತಿ ಸಂವರ್ಧನೆ ಗೊಳಿಸಲು ಕನ್ನಡ ವಿಭಾಗ ಪ್ರಾರಂಭವಾಯಿತು. ಖ್ಯಾತಸಾಹಿತಿ ಪಂಡಿತವೈ. ನಾಗೇಶಶಾಸ್ತ್ರಿಗಳು ವಿಭಾಗದ ಕನ್ನಡ ಪ್ರಾಧ್ಯಾಪಕರಾಗಿ ಹತ್ತುವರ್ಷ ಪ್ರೀತಿಯಿಂದ ಈವಿಭಾಗವನ್ನು ಕಟ್ಟಿಬೆಳೆಸಿದರು .ಅವರನಂತರ ರಾಷ್ಟ್ರಕವಿ ಕುವೆಂಪುರವರ ಶಿಷ್ಯರಾದ ಡಾ.ಎಸ್.ಎಂ.ವೃಷಭೇಂದ್ರಸ್ವಾಮಿಯವರು, ಕೆಲವುಕಾಲಸೇವೆಸಲ್ಲಿಸಿದರು. ನಂತರದ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಹೆಸರು ಮಾಡಿರುವ ಶ್ರೀಯುತರುಗಳಾದ ಕೆ.ಬಿ. ಹನುಮಂತರಾಯ, ಎಂ.ಆರ್. ವಿಶ್ವನಾಥರೆಡ್ಡಿ, ಡಾ. ಬಸವರಾಜಮಲಶೆಟ್ಟಿ, ಇಟಗಿ ಈರಣ್ಣ, ಡಾ. ಚಂದ್ರಕಾಂತವಿ. ಚೌವ್ಹಾಣ್, ಡಾ. ಎಸ್. ಶಿವಾನಂದ, ಡಾ. ಜಿ.ಕೆ. ವಿಶ್ವೇಶ್ವರಪ್ಪ,ಶ್ರೀಕೆ.ಮಹಾಬಲೇಶ್ವರ, ಶ್ರೀಕೆ.ಎಸ್.ಬಿಸರಳ್ಳಿ, ಡಾ. ಆರ್.ಬಿ.ದಿವಾಕರ, ಡಾ.ಬಿ.ಆರ್.ಮಂಜುನಾಥ ಮದಲಾದನುರಿತ ಅನುಭವಿ ಪ್ರಾಧ್ಯಾಪಕರು ವಿಭಾಗವನ್ನು ಕಟ್ಟಿಬೆಳೆಸಿದ್ದಾರೆ.

‘ಕನ್ನಡಐಚ್ಛಿಕ’ ವಿಷಯದ ಆಯ್ಕೆಗೆ ಅವಕಾಶವಿದೆ (ಕನ್ನಡಐಚ್ಛಿಕ, ಇತಿಹಾಸ, ಸಮಾಜಶಾಸ್ತ್ರ).
ಬಿ.ಎ.,ಬಿ.ಎಸ್ಸಿ.,ಬಿ.ಕಾಂ.,ಸುದೀರ್ಘ ಇತಿಹಾಸವಿರುವ ಕನ್ನಡ ವಿಭಾಗದಲ್ಲ    ಕಲಿತ ಬೇಸಿಕ್‌ ಕನ್ನಡ ಮತ್ತು ಐಚ್ಛಿಕ ಕನ್ನಡ ಅಸಂಖ್ಯಾತ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳು ಶಾಲಾ ಉಪಧ್ಯಾಯರುಗಳಾಗಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಗಳಾಗಿ ಮತ್ತು ವಿವಿಧ ಸ್ಪರ್ಧಾಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಇಲಾಖೆಗಳಲ್ಲಿ ಉನ್ನತಮಟ್ಟದ ಅಧಿಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಸಹ ‘ಕ್ಯಾಂಪಸ್ಸೆಲಕ್ಷನ್’ಗಳಲ್ಲಿ ಪ್ರಮುಖ ಕಂಪನಿಗಳಿಗೆ ಆಯ್ಕೆಆಗಿದ್ದಾರೆ. ಅನೇಕ ಬರಹಗಾರರು, ಕವಿಗಳು, ಕಥೆಗಾರರು, ಕಾದಂಬರಿಕಾರರು, ಪತ್ರಕರ್ತರು, ಕಲಾವಿದರು ನಮ್ಮ ಕನ್ನಡ ವಿಭಾಗದಿಂದ ರೂಪುಗೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದಾರೆ .ಸುಸಂಸ್ಕೃತರಾಗಿ ಸಮೃದ್ಧ ಸಮಾಜದವಾರ ಸುದಾರರಾಗಿದ್ದಾರೆ.

ಬಿ.ಬಿ.ಎಂ. ಹಾಗುಬಿ.ಸಿ.ಎ. ವಿದ್ಯಾರ್ಥಿಗಳಿಗೆ ‘ಸಾಮಾನ್ಯ (ಆವಶ್ಯಕ) ಕನ್ನಡ’ ಆಯ್ಕೆಗೆಅವಕಾಶವಿದೆ.ಎನಿಪಿಯಲ್ಲಿ ಇತಿಹಾಸದೊಂದಿಗೆ ಐಚ್ಛಿಕ ಕನ್ನಡ, ಸಮಾಜಶಾಸ್ತ್ರದೊಂದಿಗೆ ಐಚ್ಛಿಕಕನ್ನಡ, ಹೀಗೆ ಆಸಕ್ತಿ ವಿಷಯದೊಂದಿಗೆ ಐಚ್ಛಿಕ ಕನ್ನಡವನ್ನು ಅಭ್ಯಾಸ ಮಾಡಬಹುದು.

ಸಂಶೋಧನಾಕೇಂದ್ರ: ಇದೀಗ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ವೀರಶೈವ ಮಹಾವಿದ್ಯಾಲಯದಲ್ಲಿ ಸಂಶೋಧನ ಕೇಂದ್ರ ಆರಂಭಿಸಿದೆ. ಕನ್ನಡ ವಿಭಾಗದ ಸಹಪ್ರಾಧ್ಯಾಪಕರುಗಳಾದ ಡಾ. ಆರ್.ಬಿ. ದಿವಾಕರ್ಮತ್ತು ಡಾ. ಬಿ.ಆರ್. ಮಂಜುನಾಥ ಮತ್ತು ಡಾ. ವೈ. ಚಂದ್ರಬಾಬು ಇವರುಗಳು, ಸಂಶೋಧನಾ ಮಾರ್ಗದರ್ಶಕರಿದ್ದಾರೆ. ಕನ್ನಡವಿಷಯದಲ್ಲಿ ಎಂ.ಫಿಲ್., ಪಿ.ಎಚ್‍ಡಿ. ಪಡೆಯಲು ಇಚ್ಛಿಸುವವರಿಗೆ ಮಾರ್ಗದರ್ಶನ ಮಾಡುತ್ತಾರೆ.

ಸೌಲಭ್ಯಗಳು:

ಗ್ರಂಥಾಲಯ: ಅತ್ಯಂತ ಪುರಾತನ ಶ್ರೇಷ್ಠ ಗ್ರಂಥಗಳಿಂದ ಹಿಡಿದು, ಹೊಸತಲೆಮಾರಿನ ಸುಮಾರು 4,000ಕ್ಕಿಂತ ಹೆಚ್ಚು ಗ್ರಂಥಗಳು ಮತ್ತು ನಿಯತಕಾಲಿಕೆಗಳು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿವೆ.

ಡಿಜಿಟಲ್ಲೈಬ್ರರಿ: ಕೇಂದ್ರಗ್ರಂಥಾಲಯವು ವೈಫೈ (ಇಂಟರ್‍ನೆಟ್) ಸೌಲಭ್ಯದಿಂದ ಕೂಡಿದ್ದು, ವಿದ್ಯಾರ್ಥಿಗಳ ಉಪಯೋಗಕ್ಕೆ ಮುಕ್ತವಾಗಿದೆ. ಪಠ್ಯಗಳಿಗೆ ನೇರ ಹಾಗು ಪರೋಕ್ಷವಾಗಿ ಸಂಬಂಧಿಸಿದ ಮುದ್ರಿತಸಿ.ಡಿ., ಡಿ.ವಿ.ಡಿ. ಹಾಗು ಕ್ಯಾಸೆಟ್‍ಗಳ ಸಂಗ್ರಹವು ಲಭ್ಯವಿರುತ್ತವೆ. ಇವುಗಳನ್ನು ಆಯ್ದದಿನಗಳಲ್ಲಿ ಆಯ್ದ ತರಗತಿಗಳಿಗೆ ಪ್ರದರ್ಶಿಸಲಾಗುವುದು ಮತ್ತು ವಿದ್ಯಾರ್ಥಿಗಳು ಬಯಸಿದಲ್ಲಿ, ಪ್ರತ್ಯೇಕವಾಗಿ ಗ್ರಂಥಾಲಯದಲ್ಲಿ ಇರುವ ಕಂಪ್ಯೂಟರ್, ಡಿ.ವಿ.ಡಿ. ಪ್ಲೇಯರ್ಸಹಿತ ಟಿ.ವಿ. ಸೆಟ್ಹಾಗುಎಲ್.ಸಿ.ಡಿ. ಪ್ರೊಜೆಕ್ಟರ್‍ಗಳ ಮೂಲಕ ಸಣ್ಣಗುಂಪುಗಳಾಗಿಯು ವೀಕ್ಷಿಸಬಹುದು.

Contact Address

Veerashaiva College
Cantonment
Ballari

   
08392 - 242185 / 242183
    08392 - 242183
    This email address is being protected from spambots. You need JavaScript enabled to view it.
X